Thursday 10 August 2017

ತೆಳು ನೀಲಿ ಚುಕ್ಕೆ

ತೆಳು ನೀಲಿ ಚುಕ್ಕೆ


        ನಮಸ್ಕಾರ ಸ್ನೇಹಿತರೆ, ೧೯೭೭ ಸೆಪ್ಟೆಂಬರ್ ನಲ್ಲಿ ನಾಸಾ (NASA) ಸಂಸ್ಥೆ ವಾಯೋಜೆರ್-೧ ಎಂಬ ರೊಬೋಟಿಕ್ ಬಾಹ್ಯಾಕಾಶ ನೌಕೆಯೊಂದನ್ನು ಸೌರಮಂಡಲ ಮತ್ತು ಅದರಾಚೆಗಿನ ಸಂಶೋಧನೆಗಾಗಿ ಉಡಾಯಿಸಿತು. ಸುಮಾರು ೧೨ ವರ್ಷಗಳ ನಂತರ ನೌಕೆ ತನ್ನ ಪ್ರಮುಖ ಕಾರ್ಯಾಚರಣೆ ಮುಗಿಸಿ ಸೌರಮಂಡಲ ಬಿಟ್ಟು ಆಚೆ ಹೋಗುವ ಮುನ್ನ ಅದಕ್ಕೆ ಕೊನೆಯದಾಗಿ ಭೂಮಿಯ ಒಂದು ಛಾಯಾಚಿತ್ರ ತೆಗೆಯಲು ಆದೇಶ ಕೊಡಲಾಯಿತು, ಶಿವಗಾಮಿಯ ರಾಜಾಜ್ಞೆಯನ್ನು ಕಟ್ಟಪ್ಪ ಪಾಲಿಸಿದಂತೆ ಅಂದಾಜು ೬೦೦ ಕೋಟಿ ಕಿಲೋಮೀಟರು ದೂರದಿಂದ ತನ್ನ ಕ್ಯಾಮೆರ ಕಣ್ಣನ್ನು ನಮ್ಮ ಕಡೆ ತಿರುಗಿಸಿ, ಕಣ್ಣು ಮಿಟುಕಿಸಿ ಒಂದು ಛಾಯಾಚಿತ್ರ ತೆಗೆದು ಕಳುಹಿಸಿತು. ಆ ಚಿತ್ರದ ವಿಶೇಷತೆ ಏನೆಂದರೆ, ಅದರಲ್ಲಿ ಇಡೀ ಏಳು ಖಂಡಗಳ, ಪಂಚ ಮಹಾಸಾಗರಗಳ ಭೂಮಂಡಲ, ಗಣಕಯಂತ್ರದ ಒಂದು ಪಿಕ್ಸೆಲ್ ಗಿಂತಲೂ ಕಿರಿದಾಗಿ ಕಾಣಿಸುತ್ತದೆ. ಆಗಿನ ನಾಸಾ ಬಾಹ್ಯಾಕಾಶ ವಿಜ್ಞಾನಿ ಕಾರ್ಲ್ ಎಡ್ವರ್ಡ್ ಸಾಗ್ಸನ್ ಈ ಚಿತ್ರಪಟವನ್ನು ಒಂದು ತೆಳು ನೀಲಿ ಚುಕ್ಕೆ (The Pale Blue Dot) ಎಂದು ವರ್ಣಿಸುತ್ತಾನೆ.  ನಾನಿದನ್ನು ಅತಿದೂರದಿಂದ ಶಾರಿಣಿ ತೆಗೆದುಕೊಂಡ ಸ್ವಯಂ ಛಾಯಾಚಿತ್ರ (longest selfie ever taken) ಎಂದು ಬಣ್ಣಿಸುತ್ತೇನೆ 😎. ತದನಂತರ ನೌಕೆ ತನ್ನ ಕ್ಯಾಮೆರ ಕಾರ್ಯವನ್ನು ಸ್ಥಗಿತಗೊಳಿಸಿ ಮುಂದಿನ ಅನ್ವೇಷಣೆಗಾಗಿ ತನ್ನ ಯಾನ ಮುಂದುವರಿಸಿ ಇಲ್ಲಿಯವರೆಗೂ, ಅಂದರೆ ೪೦ ವರ್ಷದ ವರೆಗೂ ಅಂತ್ಯವಿಲ್ಲದೆ ಕೋಲ್ಮಿಂಚಿನಂತೆ ಅಂತರಿಕ್ಷವನ್ನು ಸೀಳಿಕೊಂಡು ಮುನ್ನುಗ್ಗುತ್ತಿದೆ.


  ಇಂದೇಕೆ ಈ ಚುಕ್ಕಿ ಹಿಂದೆ ಬಿದ್ದೆ ಎಂದರೆ, ನನಗೆ ಈ ಚಿತ್ರಪಟವನ್ನು ಜ್ಞಾನಿಗಳು ಅರ್ಥೈಸಿದ ರೀತಿ ಅದ್ಬುತ ಎನಿಸಿತು, ಅದೆಷ್ಟು ಸಣ್ಣದಾಗಿದ ಎಂದರೆ, ಇಡೀ ವಿಶ್ವ ಇಷ್ಟೇನಾ? ಪ್ರತಿಯೋರ್ವನ ಸುಖ-ದುಃಖ, ಆಸೆ-ಆಕಾಂಕ್ಷೆ, ಪ್ರೀತಿ-ಪ್ರೇಮ, ದ್ವೇಷ-ಅಸೂಯೆ, ಅನಿಸಿಕೆ-ಅಭಿಪ್ರಾಯಗಳು, ಹೊಸ ವಿಶ್ಲೇಷಣೆಗಳು, ಕಲ್ಪನೆಗಳು, ಥೇರಿಗಳು, ಪ್ರಪಂಚ ಕಂಡಂತಹ ಪ್ರತಿಯೊಬ್ಬ ರಾಜ-ರಾಕ್ಷಸರು, ಸಾಧು-ಸಂತರು, ಉಗ್ರರು, ಚಿಂತನಕಾರರು, ವಿಜ್ಞಾನಿಗಳು, ನಟಶ್ರೇಷ್ಟರು, ಆಟಗಾರರು, ರಾಜಕಾರಿಣಿಗಳು, ರಾಜಕೀಯ ಪಕ್ಷಗಳು, ಭ್ರಷ್ಟರು, ಶಿಷ್ಟರು, ಜಾತಿ-ಜಂಜಾಟಗಳು, ಧರ್ಮ-ಪಂಗಡಗಳು, ಆರ್ಥಿಕ ವ್ಯವಸ್ಥೆ, ಸಂವಿಧಾನ, ಕೋರ್ಟು-ಕಛೇರಿಗಳು, ಹೆಣ್ಣು-ಹೊನ್ನು-ಮಣ್ಣಿಗಾಗಿ ನಡೆದ ರಕ್ತಪಾತಗಳು, ಸಾವು-ನೋವುಗಳು, ಆವಿಷ್ಕಾರಗಳು, ಪ್ರಕೃತಿ ಸೌಂದರ್ಯ ಖನಿಗಳೆನಿಸಿದ ಬೆಟ್ಟ-ಗುಡ್ಡ, ನದಿ-ಸಾಗರ, ಪಶು-ಪಕ್ಷಿ ಸಂಕುಲ,ಜಲಪಾತ-ಕಣಿವೆಗಳು, ಕಡಲ ತೀರಗಳು, ಹೀಗೆ ಕಾಣಸಿಗುವ ಪ್ರತಿಯೊಂದು ವಿಷಯವೂ, ವಸ್ತುವೂ ಕೇವಲ ಒಂದು ಚಿಕ್ಕ ಚುಕ್ಕೆಯೊಳಗೆ ಮುಗುಚಿಕೊಂಡಿವೆ ಎಂದರೆ ಅರಗಿಸಿಕೊಳ್ಳಲೂ ಕಷ್ಟವಾಗುವ ಅಂಶ. ಇಷ್ಟೊಂದು ವ್ಯಾಪಕ ನಭದಲ್ಲಿ, ಇಳೆ ಮತ್ತು ಘಟಿಸಿ ಹೋದ ಘಟನೆಗಳೆಲ್ಲವೂ ಒಂದು ಮಟ್ಟಕ್ಕೆ ನಗಣ್ಯ ಎಂದರೆ ಮೈನವಿರೇಳುವುದು ಸಹಜ ಮತ್ತು ಈ ಮಾತು ನೂರಕ್ಕೆ ನೂರು ಪ್ರತಿಶತ ಸತ್ಯ ಕೂಡ.

  ಇದೇ ತರಹ ನರ-ಮನುಷ್ಯನ ಜೀವಿತಾವಧಿಯನ್ನು ಬಿಂಬಿಸುವ ಹಾಗು ಚಿಂತನೆ ನಡೆಸಬಹುದಾದ ಇನ್ನೊಂದು ಚಿತ್ರವಿದೆ, ಒಂದು ವೀಡಿಯೊ ತುಣುಕಿಂದ ಈ ಚಿತ್ರವನ್ನು ಕತ್ತರಿಸಿದ್ದು, ಆರಂಭದಿಂದಲೂ ಸಮಯವನ್ನು ಒಂದು ರೇಖಾಚಿತ್ರದಲ್ಲಿ ಗುರುತಿಸುವುದಾದರೆ, ಮಾನವ ಯುಗ ಇದರಲ್ಲಿರುವ ಕೆಂಪು ಗೆರೆಯಷ್ಟೇ:

        ನಶಿಸಿಹೋದ ಹಾಗು ಮುಂಬರುವ ಕಾಲಮಾನದಲ್ಲಿ, ಪ್ರಥಮ ಮಾನವನಿಂದ ಕೊನೆಯ ಮಾನವನವರೆಗೆ ಇರುವ ಸಮಯ ಎಷ್ಟು ಕಡಿಮೆಯೆಂದು ಗಮನಿಸಿದರೆ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲವೂ ಮಾಯವಾಗಬಲ್ಲದು ಎಂಬ ತತ್ವ ಕಣ್ಮುಂದೆ ಮಿಂಚಿ ಮರೆಯಾಗುತ್ತದೆ.
  ಸರಿ ಈಗ ವಿಷಯಕ್ಕೆ ಬರೋಣ, ಈ ತರಹದ ಚಿತ್ರಗಳನ್ನು ನೋಡಿ ನಾವು ಯೋಚಿಸುವ ಶೈಲಿ ಒಮ್ಮೆಮ್ಮೆ ಹೇಗೆ ಬದಲಾಗುತ್ತದೆ ಎಂದು, ಹೇಗೆ ಒಬ್ಬಬ್ಬರು ಒಂದೊಂದು ರೀತಿಯಾಗಿ ಇದನ್ನು ಅರ್ಥೈಸಿ ಜೀವನದಲ್ಲಿ ನಿಲುವುಗಳನ್ನು ಬೆಳೆಸಿಕೊಳ್ಳುತ್ತೇವೆ ಎಂದು. ಪ್ರಮುಖವಾಗಿ ಮೂರು ಪಂಥೀಯ ಜನರನ್ನು ಗುರುತಿಸಬಲ್ಲೆ, ಒಂದು ಕಡೆ, ಜೀವನ ಇಷ್ಟೇನಾ? ಛೆ!! ನಾನೇನು ಮಾಡಿದರೂ ನಗಣ್ಯ ಎಂದು ಎಲ್ಲವನ್ನೂ ತಿರಸ್ಕರಿಸುವ ನಿರಾಕರಣವಾದಿಗಳು (Nihilists), ಇವರ ಪ್ರಕಾರ ಇಷ್ಟೊಂದು ಅರ್ಥಪೂರ್ಣ ಬದುಕಿಗೆ ಯಾವ ಬೆಲೆಯೂ ಇಲ್ಲ, ಮತ್ತು ಅದರ ಬಗ್ಗೆ ಕಿಂಚಿತ್ತು ವಿಶ್ವಾಸ ತೋರದೆ, ಎಲ್ಲವನ್ನು ಸಾರಾಸಗಟಾಗಿ ದೂರತಳ್ಳಬಹುದು. ಇವರಿಂದ ಹಾನಿಇಲ್ಲವಾದರು, ನಯಾಪೈಸೆ ಪ್ರಯೋಜನ ಅಂತು ಇಲ್ಲ. ಆದರೂ ಇಂಥವರು ಕೊಂಚ ಅಪಯಾಕಾರಿ, ಪರರ ಜೀವನವನ್ನು ಇವರು ನಿರಾಕರಣವಾದದ ಕಡೆ ವಾಲಿಸಲು ತಮ್ಮ ಪ್ರಭಾವ ಬೀರಬಲ್ಲರು, ಕೊಂಚ ಎಚ್ಚರ ತಪ್ಪಿದರೂ ನಾವು ಈ ಕೂಪಕ್ಕೆ ಬೀಳುವುದು ಖಚಿತ.
  ಇನ್ನೊಂದು ಕಡೆ, ಅಯ್ಯೋ ಏನು ಮಾಡಿದರು ಎಲ್ಲವೂ ಶೂನ್ಯ, ಮುಂದೆ ಇವೆಲ್ಲ ಯಾವ ಲೆಕ್ಕಕ್ಕೂ ಬರುವುದಿಲ್ಲ, ಸರಿ ಹಾಗಾದ್ರೆ, ಸಿಕ್ಕ ಸಿಕ್ಕ ಕೆಟ್ಟ ಕೆಲಸಕ್ಕೆ ಕೈ ಹಾಕಬಹುದು, ಯಾರನ್ನು ಹೇಗೆ ಬೇಕೆಂದರೆ ಹಾಗೆ ಹಳಿಯಬಹುದು, ಇನ್ನೊಬ್ಬರ ಮನ ನೋಯುಸುವುದಿರಲಿ, ಗುಂಡಿಟ್ಟು ಪ್ರಾಣ ತೆಗೆಯಲೂ ಯೋಚಿಸುವವರಲ್ಲ, ಯಾಕೆಂದರೆ ಕಾಲಕ್ರಮೇಣ ವ್ಯಕ್ತಿಯೊಬ್ಬ ಹೀಗೆ ಮಾಡಿದನು ಎಂದು ಹೇಳ ಹೆಸರಿಲ್ಲದಷ್ಟು ಬದಲಾವಣೆಯಾಗುವ ದಿನ ಈ ಕಷ್ಯಪಿಗೆ ಬಂದೇ ಬರುತ್ತದೆ ಎಂದು ಧೃಡವಾಗಿ ನಂಬಿರುವ ಋಣಾತ್ಮಕ ಚಿಂತಕರು - ಅವರನ್ನು ಉಗ್ರಗಾಮಿಗಳು ಎಂದರೂ ತಪ್ಪಿಲ್ಲ, ಶ್ರೀ ಕೃಷ್ಣನ ಭಗವದ್ಗೀತೆಯ ಸಾರ-ಸಂದೇಶವನ್ನೂ ತಮ್ಮ ಗುರಾಣಿಯಾಗಿ ಹಿಡಿಯಬಲ್ಲರು. ಜೀವನ ಪರ್ಯಂತ ಜೈಲುವಾಸ ಅನುಭವಿಸಿದರೂ, ಸೃಷ್ಟಿಯ ಕಾಲಮಾನದಲ್ಲಿ ಅದು ಕೇವಲ ೦.೦೦೦೦೦೦೦೦೦೦೦೦೧% ಎಂದೂ, ಅದ್ಯಾವ ವ್ಯತ್ಯಾಸವನ್ನು ತರಲಾಗದು ಎಂದು ತುಚ್ಚವಾಗಿ ಆಲೋಚಿಸುವಂಥವರು.


        ಇನ್ನು ಕೊನೆಯದಾಗಿ ಧನಾತ್ಮಕ ಚಿಂತಕರು, ಪ್ರಪಂಚಕ್ಕಿರುವುದು ಕೋಟಿ ವರ್ಷಗಳಾದರೂ, ನನಗಿರುವುದು ಕೇವಲ ೬೦-೭೦ ವರ್ಷ ಅನ್ನುವ ಕಟುಸತ್ಯ ಅರಿತು ಬದುಕನ್ನು ಪ್ರೀತಿಸುವವರು, ಇಷ್ಟರೊಳಗೆ ನನ್ನ ಪ್ರಪಂಚ, ನಾ ಪ್ರೀತಿಸುವ ಅಪ್ಪ-ಅಮ್ಮ, ಅಣ್ಣ-ತಂಗಿ, ಮಕ್ಕಳು ಹಾಗು ಬಂಧು-ಮಿತ್ರರು ಇರುವುದು, ಇರುವಷ್ಟು ದಿನ ಚನ್ನಾಗಿ ಬದುಕಿ, ನಾಲ್ಕು ಜನರಿಗೆ ಆದಷ್ಟು ಸಹಾಯ ಮಾಡಿ, ಜೀವನದಲ್ಲಿ ಏನಾದರು ಸಾಧಿಸಿ ಮುಂದಿನ ಪೀಳಿಗೆಗೆ ಕೊಡುಗೆಯೊಂದನ್ನು ನೀಡಬೇಕು ಎನ್ನುವ ಚಿಂತಕರು, ಇಂಥವರಿಂದಲೇ ಆವಿಷ್ಕಾರಗಳು ನಡೆಯಲು ಸಾಧ್ಯ , ಹೊಸ ತಿರುವು ಕಾಣಲು ಸಾಧ್ಯ, ಅದೇ ಕೃಷ್ಣ ಜನ್ಮಸ್ಥಳದ ಉದಾಹರಣೆಗೆ ಬರುವುದಾದರೆ, ಉರುಳುವ ಕಾಲಕ್ಕೆ ನನ್ನ ಆಯಸ್ಶು ೦.೦೦೦೦೦೦೦೦೦೦೦೦೧% ಆದರೆ, ನನಗೆ ನನ್ನ ಆಯಸ್ಸು ೧೦೦%, ಏನು ಮಾಡಿದರು ಈ ಜನ್ಮದ ಕಾಣಿಕೆಯಲ್ಲೇ ನನ್ನ ಲೋಕ ಎಂದು ಅರಿತಿರುವವರು.
        ಈ ಧನಾತ್ಮಕ ಚಿಂತನೆಗಳಲ್ಲೂ ಒಂದು ಸಣ್ಣ ತೊಡಕಿದೆ. ಕೆಲವೊಂದು ಪಾಸಿಟಿವ್ ಹೇಳಿಕೆಗಳು ಸರಿಯಿದ್ದರೂ ಅವನ್ನು ಯಾವಾಗಲೂ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಗುರುವರ್ಯರೊಬ್ಬರು ಹೇಳುತ್ತಾರೆ, "ಜೀವನದಲ್ಲಿ ಉಸಿರಾಡುತ್ತಿರುವುದೇ ಒಂದು ಆನಂದ, ನೀನು ಮತ್ತು ನಿನ್ನವರು ಬದುಕುಳಿದಿದ್ದಾರೆ ಎನ್ನುವುದೇ ಸಾಕು ಸಂಭ್ರಮಿಸಲು, ಸಂತೋಷವಾಗಿರಲು, ಇದಕ್ಕಿಂದ ಇನ್ನೇನು ಬೇಡ" ಎಂದು. ಇದು ಒಪ್ಪುವ ಮಾತು, ಸಂಶಯವೇ ಇಲ್ಲ, ಆದರೆ ಎಲ್ಲ ಸಂದರ್ಭದಲ್ಲೂ ಈ ಮಾತು ನಿಜವೇ? ನನ್ನ ಪ್ರಕಾರ ಸ್ಪೂರ್ತಿ ನೀಡುವ ಈ ವಚನ, ಬದುಕಲ್ಲಿ ಇನ್ನೇನು ಸೋತು ತಳಹದಿಗೆ ಬೀಳುವ ಸ್ತಿತಿಯಲ್ಲಿ ಉಪಯೋಗಕ್ಕೆ ಬರುತ್ತದೆಯೇ ಹೊರತು, ಏನಾದರೂ ಸಾಧಿಸಿ, ಬಾಳಿನಲ್ಲಿ ಉತ್ತುಂಗಕ್ಕೆ ಏರುವ ಪಥದಲ್ಲಿರುವವನಿಗಲ್ಲ. ಆಗ ಬೇಕಿರುವುದೇನಿದ್ದರು "ಅಸಾಧ್ಯವೆಂಬುದು ಯಾವುದೂ ಇಲ್ಲ, ನಡಿ ಮಗ ನಿನ್ನಿಂದ ಸಾಧ್ಯ ಇದು" ಎನ್ನುವ ಪ್ರೇರೇಪಣೆಗಳು. ಎರಡೂ ಮಾತುಗಳು ಬದುಕನ್ನು ಧನಾತ್ಮಕ ರೀತಿಯಲ್ಲಿ ಬದಲಾಯಿಸುತ್ತವೆಯಾದರೂ, ಪ್ರತಿಯೊಂದನ್ನು ಸ್ವೀಕರಿಸಲು ತನ್ನದೇ ಆದ ಸಮಯವಿದೆ. ಈ ಸಣ್ಣ ಗಂಟು ಅರ್ಥವಾಗದೆ ಕೆಲವರು, ಈ false-positive ಅಂದರೆ ಧನಾತ್ಮಕ-ಹುಸಿ ಬದುಕಿಗೆ ಒಗ್ಗಿಕೊಂಡುಬಿಡುತ್ತಾರೆ. ಕೆಳಗಿನ ರೋಗ ಪತ್ತೆ ವಿಧಾನದ ಚಿತ್ರ ಗಮನಿಸಿದರೆ ಹುಸಿ-ಧನಾತ್ಮಕ ಬದುಕು/ಸಂತೋಷ ಏನೆಂದು ತಿಳಿಯಬಹುದು.


        ಕೊನೆಯಲ್ಲಿ ಹೇಳಬಯಸುವುದೇನೆಂದರೆ, ದಿನಬೆಳಗಾದರೆ ಕಾಣುವ/ಕೇಳುವ ಎಲ್ಲಾ ವಿಷಯ, ಚಿತ್ರ, ಚಲನಚಿತ್ರ, ಹೇಳಿಕೆಗಳು, ಸನ್ನಿವೇಷಗಳು, ಏನಾದರೊಂದು ಸಂದೇಶ ಕೊಟ್ಟೇ ಕೊಡುತ್ತವೆ, ಅದನ್ನು ಹೇಗೆ ಅರ್ಥೈಸಿ ಸ್ವೀಕರಿಸಿ ಭವಿಷ್ಯವನ್ನು ಬರೆದುಕೊಳ್ಳುವುದೋ ನಮ್ಮ-ನಿಮ್ಮ ಕೈಯಲ್ಲಿದೆ, ನಿರಾಕರಣವಾದಿಗಳಾಗುತ್ತೀರೋ, ಋಣಾತ್ಮಕ, ಧನಾತ್ಮಕ, ಇಲ್ಲಾ false-positive ಆಗುತ್ತೀರೋ ನಿಮಗೆ ಬಿಟ್ಟ ವಿಚಾರ. ಸಾಧ್ಯವಾದಷ್ಟು ಎಲ್ಲವನ್ನು ಪಾಸಿಟಿವ್ ಆಗಿ ಅರ್ಥೈಸಲು ಪ್ರಯತ್ನಿಸೋಣ, ಮತ್ತು ಅರ್ಥಮಾಡಿಕೊಂಡ ತಾತ್ಪರ್ಯವನ್ನು ಸಮಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳೋಣ.ಈ ತೆಳು ನೀಲಿ ಚುಕ್ಕೆ ನಿಮ್ಮ ಜೀವನ ಇಷ್ಟೆ ನೋಡಿ ಎಂದೂ ಹೇಳುತ್ತದೆ ಹಾಗು ನಿಮ್ಮ ಜೀವನ ಇಷ್ಟೇ ಅಲ್ಲ, ಅದರಾಚೆಗೂ ಇಷ್ಟಿದೆ ನೋಡಿ ಅಂತಲೂ ಹೇಳುತ್ತದೆ, ಅದನ್ನು ಹೇಗೆ ತೆಗೆದುಕೊಳ್ಳುವುದು ಅವರವರ ಅಭಿರುಚಿಗೆ ಬಿಟ್ಟ ವಿಚಾರ 🙇🙇🙇

*** ಕಾಲಾಯ ತಸ್ಮೈ ನಮಃ ***

-ಭದ್ರ

Sunday 23 July 2017

The Great Grand Canyon

The Great Grand Canyon

Well, I heard this in a Telugu movie, If you hike up Doodh Kaashi you will get to know who you are, this quote just lingered in me all the while I hiked into fat belly of the Great Grand Canyon, I find this quote so legitimate, every difficult hike you accomplish, you explore yourself more. We had a complete 8 days trip, but most memorable parts I carry with me on a high note (or etched in my memory as the word is getting some attention nowadays) are the first 3 days of the trip - hiking, hiking and hiking. Day one was entirely a different one, never experienced a trail in knee level flowing water in a narrow stretch of rocks, with walls rising up to thousand feet either sides - it’s in Zion National Park and it's called Narrows. Day 2 was little crazy, this hike is not for the people with acrophobia, It's Angel’s Landing hike in same Park, imagine walking on a thousand four hundred feet wall edge, they have anchored chains for support at many places in last half a mile hike, one wrong step would probably be the last step, Sebastian and Biswa managed to capture the amazing hike with their Go-pros. I will not spend much time in elaborating these 2 hikes, I consider Narrows entirely distinct one, Angels Landing is a test on your body balancing ability, I would want to write about the Grand Canyon, which by Sebastian's words, was a Solid test of character of each hiker,

Narrows - Manny and Aravind

A view of Angels Landing

              NPS – National Park Service of USA, clearly mentioned, hiking down to the river and coming back in a day is not recommended, yet we decided to test it. In each trek I had been previously, each step I took uphill, got the sterling view of the boundless nature below, you don’t see anything when you start, and as you get closer to the peak you get the charismatic view of the earth below you. But this was the dead opposite, we start the hiking with a magnificent view of the enormous canyon below us, as we walk down, the visibility area diminishes and we reach down to the bottom where the dominant Colorado river gushes her way west. Mark my words it’s not easy, according to NPS stats, over 250 people are rescued from Canyon every year.

That's the warning

                When I heard the plan of going down the canyon for 8.5 Miles (13.6 KMs) and coming back the same stretch (27.2 KM in total) with an elevation change of almost 5000 feet, I was not sure about my fitness, I had a bad experience last time hiking Mt.Washington. Though I am a master in walking downhill in any condition, coming back up was giving me other ideas. Ten of us started around 9:30 AM in the morning from Bright Angels trail head. After getting down the car with my backpack stuffed with adequate water and food, and walking for 10 seconds, damn!!! Something was seriously wrong, I just realized I was walking with slippers and not wearing shoes, did I prepare myself that bad for this strenuous hike? Possibly I concentrated too much on my breakfast than shoe J  I went back and put my shoes on and headed back to trail head. I couldn’t find anyone except Hari who was waiting for me, all 8 of them were out of sight into the canyon, that’s where the cheating game begins, you just walk down freely without any concerns, you just feel the amount of distance covered, and the confidence boost of hiking fast. No, that’s not really true, it's kind of fake. When climbing up mountains you get to face the mightiness of nature within few minutes, but in this case, canyon lures you by effortless descent, coming back is the big game here. As I started my descent, I just started enjoying the tremendous potential of nature, extreme work of water over millions of years, carving the land into a canyon over a period of time where the human race was nowhere near it. Changing colors of rocky walls as you descend explains different stories corresponding to their age, googling would give better details than me. Along with artistic mega structure, every step I stepped down was asking me a question, "Is it possible for you to climb this step back?" after a mile and half we get the first rest area with water, I was just doing fine, ignored it and went down, another mile and half for second rest area, and another little less than 2 miles to Indian Gardens, this 4.9 miles was effortless, we did in 2 hours. We had already descended 3200 ft, Indian Gardens was adorable with trees around for shade and ice cold water for refilling bottles, Aravind, Sebastian, and Manoj were already there enjoying the cool shades of trees which is very rare to get in deserted canyon,

Mighty Canyon

A few minutes later Bro Mahesh, Niraj, Biswa, Hari arrived, no sign of Sadham and Sudhakar!! From Indian Gardens we have 2 trails, one going towards Plateau Point which is almost at the same elevation as Indian gardens, and we get a splendid view of Colorado from there. It’s a walk of 1.5 miles from Gardens, but with the scorching sun on top and no trees for shade or whatsoever is still a challenging one, another one is continued part of Bright Angels leading to the river, which was another 3.2 Miles from there and an elevation change of 1500 feet. We had to make a decision. What next? Plateau Point or River? I was uncertain at that point, Mahesh and Aravind choose to go to Plateau point, Niraj, Sebastian, Biswa, Manoj, Hari were ready to go down to the river, and I was already looking up the canyon thinking how to climb this 4.9 miles back first. I opened the map and started reading the numbers, till then I didn’t know any of the numbers I have written above, this fact just asked me to go to river: “We have already climbed down 3200 ft or something in 5 miles, So another 1400 ft with 3 more miles shouldn’t be that steep, studied the map again and cross checked the contour lines of map, closer the lines drastic the elevation change at that point, I concluded it was not as steep as what we have already descended”, and I was ready to go to river, and regarding Sadham and Sudhakar, either they are already heading back or they will reach and wait at Gardens for Bro and Aravind.
                At 11:45 or so six of us were back on the Bright Angels trail leading to the river. This time I just started jaunting without turning back, it was so hot, literally boiling, I could sense the heat waves of canyon hitting me. Luckily, we had a small stream flowing down along with us for the first quarter of next 3 miles, I dipped my cap in water and drank some very often to keep myself hydrated. Once stream took its own route leaving us alone on the trail, we were hit by heat waves even harder, we were sweating out all the way, for the first time I felt a break was needed while trekking down as well. Manoj was with me, we stopped for 2 mins, poured the bottle of water on the head, sipped some electrolytes and started again. Now it looked like Colorado was playing hide and seek, as we cut a corner of trail it was as if river is on another corner, but it was not, you just walk, walk and walk, yet you don’t find the river, there were no mileposts down there to analyze how far we were from Indian Gardens. Finally when we reached the river, Oh Man!!! What a pleasure it was, there was sand beside water, removed shoes, clothes and started walking towards waters, I felt the feet burning for a second, it was damn hot, ran with full strength towards the water.

Seb, Biswa Hari cutting a corner towards river

                As soon as my feet sensed Colorado river, I was astonished by the nature's incredible craziness, it was freezing cold, you step on sand it's freaking hot, step into the water its ice cold, I was dumbstruck with this natural phenomenon. Soon everyone arrived and experienced the same, all we did for next 1 hour or so was – get into water for few seconds – come out because water is damn cold – water layer on body will dry away in one min – start feeling the heat waves – and get into water again to get rid of heat. This was the cycle for all of us, around 2:30 we stopped this, clicked some pics, and headed to the rest area. We heated up the food we carried, probably I was damn hungry, the rice and beans with added hot water, I felt like Indian rice-sambar in middle of the hot desert, it was delicious. We decided we start back by 4 PM.

One-way mission accomplished

                The real hike began then, entire body is going to be tested to the core, not just physically, mentally as well - you don’t want your troop to leave behind because of you, I did something different this time as opposed to my previous hikes, I usually start with full speed hike and get tired very soon, but this time, I decided to go with slow and steady approach. Along with team we decided on divide and conquer rule, divided the trek into two parts, first one to Indian Gardens, and Garden to the trail head, and each half is divided again into a hike of 15-20 mins and a break. Hari and me started slowly, we could see Niraj few meters ahead of us, but other three were little faster, we couldn’t see them as the trail was cutting corners often. I mentally prepared myself for 10-hour ascent that means we would reach by 2 AM!!! Even at 4 PM, Sun was still blazing, as the Sun started descending, our ascent pace started getting some acceleration, I could hear my heart beat clearly after few steps. We took breaks as needed. Exceptionally, we were ahead of schedule, and we reached Indian Gardens by 6:05 PM, that was really not expected. Seb had reached just 5 mins before us, I was definitely going strong without much efforts. So, the slow and steady option did the trick, a great lesson for me for upcoming hikes.

Indian Gardens - a cool place on the way

                Indian Gardens was an ultra refreshing area, rested there for next twenty minutes, talking about how to conquer next 5 miles with super elevation coming up, met a forest park ranger who inquired about how we were doing and if there is any issue. We refilled bottles and had energy bars, I washed my t-shirt to wear a wet one going up, and we were back on foot. Somehow next 5 miles of climb turned out to be most memorable hikes I ever had, we were having so much of fun, teasing each other, talking how energetic each one is for this difficult hike, not even single person was ready to give up at any point. The tiredness was really gone, taking videos, doing all possible nonsense all the way up, that’s when Seb uttered, “This hike is solid test of everyone’s character”, added advantage was Sun was going down gradually and we were getting the shades of canyon along the way, and yeah I was telling to every imaginary foot print I left when I went down “See I am stepping on you to step up with zero difficulty.” We reached 3-mile post with 2 breaks, guess that was just about 1 hour, took a little longer break of 10 mins, got the network on phone, and dialed bro as he too had Verizon. We thought they would have left to the camp ground by now, and wanted them to be at parking to pick us at 10:15. But to my surprise, they were still climbing the canyon and were about to reach in another half an hour, he said he will have dinner and wait for us. The same story continued, we were just climbing up without any hiccups. Tiredness was not at all bothering us, I am not getting words to explain those moments. Before we reached 1.5-mile post, it was dark, we met a group of guys who were not having enough torches, we decided to take them with us as each one of us had head lamps on, it was 8:30 PM sharp when we began. As we climbed for 10 mins, one of the guys in other group started feeling giddiness, and this continued, breaks were increasing as often as 10 mins, we called Aravind up and ordered a big pizza for these guys, you should see the happiness on their faces when we gave them pizza when we reached top.

When I said we were not tired, I really meant it. 

                It was 10:15 when we made it to trail head, I just punched in air and was so proud of accomplishing this tremendous task in a single day, thanked God for giving such a strong heart, I promised him to tune it even better, you literally feel the satisfaction of doing something really awesome. You get to know your strength, you know how much your body can take, and how to shape it better for future endeavors, you get to see yourself differently now. Until today this was the most difficult and longest trail I achieved in a single day, but these five guys made it look so easy. Next few days we covered few more places, Los Angeles, Death Valley National Park which is 287 feet below sea level - the lowest point in North America, hottest places on earth, 134 F is official record and we got to experience 131 F, Las Vegas, Hoover Dam etc.

                If someone asks me what’s the most amazing thing you did in last 5 years until this trip I would have said, "jumping out of a plane". Today if you ask me the same, I would say skydiving and hiking down to Colorado and coming up in a day.

-Bhadra

Sunday 9 July 2017

ಹೀಗೊಂದು ಕಲ್ಪನಾ ಲಹರಿಯಲ್ಲಿ

ಹೀಗೊಂದು ಕಲ್ಪನಾ ಲಹರಿಯಲ್ಲಿ.

  ನಮಸ್ಕಾರ ಗೆಳೆಯರೇ, ಸ್ನೇಹಿತರ ಜೊತೆಗೂಡಿ ಹೀಗೆ ಪ್ರವಾಸಕ್ಕೆಂದು ಹೊರಟಿದ್ದೆವು, ೫ ಘಂಟೆಯ ನಮ್ಮ ವಿಮಾನ ಪ್ರಯಾಣದಲ್ಲಿ ಮೊದಲ ೩ ಘಂಟೆ ಚೆನ್ನಾಗಿ ಉನೋ ಕಾರ್ಡ್ಸ್ ಆಡಿದ ನಂತರ ನಿದ್ದೆಗೆ ಜಾರಲು ಯತ್ನಿಸುತ್ತಿದ್ದೆವು. ಇನ್ನು ೨ ಘಂಟೆ ಪ್ರಯಾಣವಿತ್ತು ಆದರೆ ಯಾಕೋ ನಿದ್ರಾದೇವಿ ಸಹಕರಿಸುತ್ತಿರಲಿಲ್ಲ, ಕಿಟಕಿ ಪಕ್ಕ ಹಾಗೆ ಹೊರಗಡೆ ಇಣುಕಿ ಬೃಹದಾಕಾರದ ಭೂಗೋಳವನ್ನು ಗಮನಿಸುತ್ತಿರುವಾಗ, ಹಾಗೆ ಒಂದು ವಿಚಾರ ಥಟ್ಟಂತ ಹಾದು ಹೋಯಿತು. ತಲೆಗೆ ಬಂದ ವಿಚಾರವನ್ನು ಹಾಗೆ ಬರೆಯಲಾರಂಭಿಸಿದೆ, ನಾನೇಕೆ ಈಗ ಪ್ರಯಾಣಿಸುತ್ತಿರುವೆ? ಅಲ್ಲಲ್ಲ, ನಾನೇಕೆ ಈ ಅಮೆರಿಕಾಕ್ಕೆ ಬಂದದ್ದು? ನೋ ನೋ, ನಾನೇಕೆ  ಕೆಲಸಕ್ಕೆ ಸೇರಿದ್ದು? ನಾನೇಕೆ ಶಾಲಾ-ವಿದ್ಯಾಭ್ಯಾಸದ ಹಿಂದೆ ಬಿದ್ದದ್ದು? ಅಲ್ಲಿಗೆ ನಿಲ್ಲಲ್ಲಿಲ್ಲ, ನಾನೇಕೆ ಜನಿಸಿದ್ದು? ಒಮ್ಮೆ ನಸುನಕ್ಕು ಇನ್ನು ಹಿಂದೆ ಸರಿದ ನನಗೆ ಈ ವಿಶಾಲ ಪ್ರಪಂಚದಲ್ಲಿ ನಾನ್ಯಾವ ಲೆಕ್ಕ, ಮೊದಲಿಗೆ ಮನುಷ್ಯ ಏಕೆ ಉದಯಸಿದ್ದು? ಇನ್ನು ಆಳವಾಗಿ ಹೋದರೆ, ಈ ವಿಶ್ವವಿರುವುದಾದರು ಯಾಕೆ? ಬೆಟ್ಟ-ಗುಡ್ಡ, ಪ್ರಾಣಿ-ಸಸ್ಯ ಸಂಕುಲ, ವಿಶಾಲ ಸಾಗರ, ಜಲಚರ ಜೀವಿಗಳು ಇರುವುದಾದರು ಯಾಕೆ? ಸೂರ್ಯ ಚಂದ್ರರ ಸೃಷ್ಟಿಯಾದರು ಯಾಕಾಯಿತು? ಇನ್ನು ಧೀರ್ಘಕ್ಕೆ ಹೋಗುವುದಾರೆ, ಈ ವಿಶಾಲವಾದ ನಭೋಮಂಡಲವೆಲ್ಲಿಂದ ಬಂತು? ಇಷ್ಟೊಂದು ಜಾಗವಿರುವ ಅರ್ಥವಾದರೂ ಏನು?  ಹೀಗೆ ಕೊನೆ ಇಲ್ಲದ ಪ್ರಶ್ನೆಗಳ ಸರಮಾಲೆಯ ದಿಗ್ದರ್ಶನವಾಯಿತು,

ಅಯ್ಯಯ್ಯೋ, ಇದ್ಯಾಕೋ ತುಂಬಾ ಅತಿಯಾಯ್ತು ಅನ್ನುವ ಹೊತ್ತಿಗೆ ಮತ್ತೆ ಯೋಚನಾಲಹರಿ ಮಾನವನ ಉಗಮ, ಹಾದಿಯ ಕಡೆಗೆ ಸಾಗಿತು.  ಸರಿ ಬಿಡಿ ಹೇಗೋ ಮಾನವನ ಉದಯವಾಯಿತು, ಅವನ ಹುಟ್ಟಿನ ಮುಂಚೆಯೇ ಅವನಿಗೆ ಬೇಕಾದ ಊಟ ಉಪಚರಗಳೆಲ್ಲ ಸಿದ್ಧವಾಗಿದ್ದವು. ಯಾರೂ ತಟ್ಟೆಯಲ್ಲಿ ಇಟ್ಟು ಕೊಟ್ಟಿರಲಿಲ್ಲ ರೀ, ಅದೇ ಹಣ್ಣು-ಹಂಪಲು ಗೆಡ್ಡೆ-ಗೆಣಸು ಎಲ್ಲ ಇದ್ದವಲ್ಲ? ಒಮ್ಮೊಮ್ಮೆ ಕಷ್ಟಪಟ್ಟರೆ ಸಿಗುತ್ತಿತ್ತು ಒಮ್ಮೊಮ್ಮೆ ಸುಲಭವಾಗಿ. ಆದರೆ ಹಸಿವೇಕೆ ಆಗುವುದು ಎಂದು ಪ್ರಶ್ನಿಸಿದರೆ ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ಹುಟ್ಟು-ಸಾವಿನ ಜೊತೆಗೆ ಹಸಿವು ಬಳುವಳಿಯಾಗಿ ಬಂದಿತು ಅಂದುಕೊಂಡು ಅಲ್ಲಿಗೆ ಹಸಿವಿನ ವಿಷಯ ಬಿಡೋಣ. ಈ ಹಸಿವು ನೀಗಲು ಸುತ್ತಮುತ್ತ ಸಕಲ ಸೌಕರ್ಯವಿರುವಾಗ, ಯಾವ ಪರಮ ಪುಣ್ಯಾತ್ಮ ತಲೆಗೆ ತುಂಬಿದಾ ರೀ ಈ ಮಾನವನಿಗೆ ಮುಂದೆ ಹೋಗಲು? ಸುಮ್ನೆ ಆರಾಮಾಗಿ ಕಾಡು-ಮೇಡು ಅಲೆದಾಡಿಕೊಂಡು, ಸಿಕ್ಕಿದ್ದನ್ನು ತಿನ್ಕೊಂಡು ಜೀವನ ಸಾಗ್ಸೋದ್ ಬಿಟ್ಟು ಯಾಕ್ ಬೇಕಿತ್ತಪ್ಪ ಈ ಇಲ್ದೆ ಇರೋ ಉಸಾಬರಿ ಎಲ್ಲ? ಯಾರಪ್ಪ ಇವನಿಗೆ ಬಟ್ಟೆ ಹಾಕೋಬೇಕು ಎಂಬ ಉಪಾಯ ಕೊಟ್ಟವರು? ಬಟ್ಟೆ ಎಂದರೆ ಜೀನ್ಸ್ ಟಿ-ಶರ್ಟ್ ಅಲ್ಲ ಪ್ರಭುವೇ, ಎಲೆ ಪೋಣಿಸಿ ಗುಪ್ತಾಂಗವನ್ನು ಮೊದಲು ಮುಚ್ಚಿಕೊಂಡಿದ್ದು. ಮಾನವನಿಗೆ ಹಸಿವಿನ ಜೊತೆ, ತನ್ನ ಅಸ್ತಿತ್ವನ್ನು ಉಳಿಸಿ ಹೋಗಬಹುದೆಂಬ ನೈಸರ್ಗಿಕ ಅರಿವೊಂದು ಉಡುಗೊರೆಯಾಗಿ ಬಂತು ಎನ್ನಬಹುದು. ಮಾನವನಂತೆ ಎಲ್ಲ ಪಶು-ಪಕ್ಷಿಗಳಿಗಳಿಗೂ ಈ ವ್ಯವಸ್ಥೆ ಇತ್ತು, ಆದರೆ ಅದಕ್ಕೋಸ್ಕರ ಇರುವ ಅಂಗಾಂಗಗಳನ್ನು ಮಾನವರಿಂದ ಮಾತ್ರ ಮುಚ್ಚಿಕೊಳ್ಳುವ ಕ್ರಿಯೆ ಯಾಕೆ ಶುರುವಾಯಿತೆಂದು ನನಗೀಗಲೂ ನಿಜವಾಗಿಯೂ ತಿಳಿಯದು. ನಿಮಗೇನಾದರೂ ತಿಳಿಯಿತೆ ಯಾಕೆ "ಬಟ್ಟೆ ಉಂಟು" ಎನ್ನುವ ಸಂಪ್ರದಾಯ ಶುರುವಾಯಿತೆಂದು?

ಈಗಾಗಲೇ  ದೊಡ್ಡ ದೊಡ್ಡವರು  ಹೇಳಿರುವ ಹಾಗೆ ಮಾನವನಿಗೆ ಬುದ್ಧಿ ಶಕ್ತಿ ಅವನು ತಯಾರಾದಾಗಲೇ ಬೇರೆ ಜೀವಿಗಳಿಗಿಂತ ಜಾಸ್ತಿ ಇತ್ತು. ಥತ್, ಅಲ್ಲೇ ನೋಡ್ರಿ ಎಡವಟ್ಟು ಶುರುವಾಗಿದ್ದು. ಯಾಕಪ್ಪ ಬೇಕಿತ್ತು ಈ ಹೆಚ್ಚುವರಿ ಬುದ್ಧಿಶಕ್ತಿ? ಆಗ ಸಿಕ್ಕ ಆ ಅಧಿಕ ನೈಜ ಕಾಣಿಕೆ ಈಗ ಸುಖಕರ ಜೀವನಕ್ಕೆ ತಂದು ನಿಲ್ಲಿಸಿದೆಯೋ ಅಥವಾ ಪೈಪೋಟಿ ಜೀವನಕ್ಕೆ ತಂದು ನಿಲ್ಲಿಸಿದೆಯೋ? ದೇವರಾಣೆ ಅರ್ಥ ಆಗ್ತಿಲ್ಲ ಕಣ್ರೀ. ಅಲ್ಲಿಂದ ಆರಂಭವಾದ ಮಾನವನ ಪಯಣ ಇಲ್ಲಿವರೆಗೂ ತಿರುಗೀ ತಿರುಗೀ ತಿರುಗೀ ನೀವ್ ನೋಡ್ತಿರೋ ಈ ಸೂಪರ್ ಸ್ಪರ್ಧಾತ್ಮಕ ಸ್ಥಿತಿಗೆ ಬಂದು ನಿಂತಿದೆ, ಮಗು ಎದ್ದು ಅಮ್ಮನ ಮಡಿಲಲ್ಲಿ ಆಡೋ ವಯಸ್ಸಲ್ಲಿ ಕಾನ್ವೆಂಟ್ ಮೇಡಂ ಜೊತೆ ABCD ಹಾಡೋ ಪರಿಸ್ಥಿತಿ.

ಬದುಕಿಗೆ ಒಂದು ಅರ್ಥ ಕಲ್ಪಿಸಿಕೊಡುವ ಭರಾಟೆಯಲ್ಲಿ ಕಷ್ಟ ಪಡಬೇಕೋ? ಸುಖವಾಗಿರಬೇಕೋ? ಅಥವಾ ಮುಂದೆಂದೋ ಸುಖಕರವಾಗಿರಲು ಇಂದು ಕಷ್ಟ ಪಡಬೇಕೋ? ಅನ್ನುವ ಸ್ಥಿತಿಗೆ ತಲುಪಿದೆವಲ್ಲ ನಾವು? ಹೌದು, ಈ ಸುಖಕರ ಜೀವನ ಅಂದ್ರೆ ಏನು? HSR ನಂಥ ದೊಡ್ಡ ಬಡಾವಣೆಯಲ್ಲಿ ಒಂದು ಒಳ್ಳೆ ಮನೆ ಕಟ್ಕೊಂಡು, ಅಡ್ಡಾಡೋಕೆ ಒಂದು ಕಾರ್ ತಗೊಂಡು, ತಿಂಗಳಿಗೊಂದು ಊರು ಸುತ್ಕೊಂಡು, ಹೆಂಡ್ತಿ-ಮಕ್ಳು ಜೊತೆ ಆರಾಮಾಗಿ, ಯಾವುದೆ ಚಿಂತೆ ಇಲ್ದೆ ಸಂಸಾರ ಮಾಡೋದಾ? ಇದ್ದರು ಇರಬಹುದು ಇದ್ದರು ಇರಬಹುದು. ಅಥವಾ ಸೂರ್ಯನ ಕಿರಣ ಮೈ ಮೇಲೆ ಬಿದ್ಮೇಲೆ ಎದ್ದು, ನದಿಯಲ್ಲಿ ಈಜಾಡಿ, ಯಾವದಾದ್ರು ಹಣ್ಣು ಹಂಪಲು ತಿಂದು, ಆಕಡೆ-ಈಕಡೆ ಅಡ್ಡಾಡಿ, ಮರ-ಬೆಟ್ಟ ಹತ್ತಿಳಿದು, ಹೊತ್ತಿಳಿದ ಮೇಲೆ ಮತ್ತೆ ಮಲ್ಕೊಳೋದ? ಏನಪ್ಪಾ ಈ ಗೊಂದಲ? ಎರಡನೆಯದನ್ನು ಮಾಡೋಕೆ ಏನೂ ಬೇಕಿಲ್ಲ, ಮನುಷ್ಯನ ಸೃಷ್ಟಿಯಾಗಿದ್ದೆ  ಹಾಗೆ ಅಲ್ವ? ಏನ್ ಕಮ್ಮಿ ಆಗಿತ್ತು ಅಂತ ಈ ಜನ್ಮಕ್ಕೆ? ಸ್ವಚಂದ ಪರಿಸರವಿತ್ತು, ತಿನ್ನಲು ಆಹಾರವಿತ್ತು, ನಿದ್ರೆಗೆ ಗುಹೆ, ಪೊಟರೆಗಳಿದ್ದವು, ನೈಸರ್ಗಿಕ ಕ್ರಿಯೆ ನೀಗಿಸಿಕೊಂಡು ಅಸ್ತಿತ್ವವನ್ನು ಉಳಿಸಿ ಹೋಗಲು ಹೆಣ್ಣು-ಗಂಡು ಎಂಬ ಜಾತಿಯೂ ಇತ್ತು. ಆದ್ರೆ ಯಾವ ಕ್ಷಣದಲ್ಲಿ ಈ ತಿರುವು ಬಂತು ಈ ಹೈದನ ತಲೆಯಲ್ಲಿ,? ಯಾಕೆ ಈ ಆವಿಷ್ಕಾರಗಳ ಹಿಂದೆ ಬಿದ್ದ?



ಬದುಕನ್ನು ಸುಖಕರ ಮಾಡಿಕೊಳ್ಳುವ ಹಂಬಲದಲ್ಲಿ ಯಾಕೆ ಕಷ್ಟವನ್ನೂ ಸೇರಿಸಿಕೊಂಡ? ಮಾನವನ ದಾರಿ ಇತರೆ ಜೀವಿಗಳ ಜೀವನ ಶೈಲಿಯ ಹಾದಿಯಿಂದ ಕವಲೊಡೆದು, ಈಗಿನ ಆಧುನಿಕ ಪರಿಸ್ಥಿತಿಗೆ ತಲುಪಿರುವುದು ರೋಮಾಂಚನಕಾರಿ ಎನಿಸುವುದಿಲ್ಲವೇ? ತಿಂದುಂಡು-ಮಲಗಿ ಬದುಕುವ ಮಧ್ಯದಲ್ಲಿ, ಈ ಮಾನವ ನಿರ್ಮಿತ ಮನೆ-ಮಠ, ದೇವ್ರು-ದಿಂಡ್ರು, ಓದು-ಬರಹ, ಕೆಲಸ-ಕಾರ್ಯ, ದುಡ್ಡು-ಕಾಸು, ನಿನ್ನಾಸ್ತಿ-ನನ್ನಾಸ್ತಿ,, ಬಡತನ-ಸಿರಿತನ, ಮೇಲ್ಜಾತಿ -ಕೀಳ್ಜಾತಿ, ಕಂಪ್ಯೂಟರ್-ಸಿ-ಜಾವ, ಬಸ್ಸು-ಲಾರಿ-ವಿಮಾನ-ರಾಕೆಟ್, ಅಯ್ಯಯ್ಯೋ ಹೇಗೆ ಒಂದಾದಮೇಲೆ ಒಂದು ಬಂದು ನಮ್ಮೊಳಗೊಂದಾದವು ಎಂಬುದೇ ವಿಚಿತ್ರ. ಇವು ಇಲ್ದಿದ್ರೆ ಹೆಂಗಿರ್ತಿತ್ತು? ಕೆಲವು ಆವಿಷ್ಕಾರಗಳು ನಡೆಯದಿದ್ದರೆ ಜೀವನ ಸಾಗಿಸುವುದೇ ಕಷ್ಟ ಎನ್ನುವ ಸಮಯ ಬಂದಾಗಿದೆ, ಇವ್ಯಾವೂ ಇಲ್ಲದೆಯೂ ಒಂದು ಪ್ರಪಂಚವಿತ್ತು ಎಂಬ ಕಟು ಸತ್ಯ ಯಾವಾಗಲೋ ಮರೆಯಾಗಿದೆ. ಕೆಲವು ಬದುಕನ್ನು ಸರಳಗೊಳಿಸಿದ್ದರೆ, ಇನ್ನು ಕೆಲವು ಅಂಶಗಳು  ಜೀವನವನ್ನು ವಿರೂಪಗೊಳಿಸಿವೆ ಎಂದರೆ ತಪ್ಪಾಗಲಾರದು ಅನಿಸುತಿದೆ. ಈ ಹುಲಿ-ಸಿಂಹ-ಆನೆಗಳಿಗೆ ಹೋಲಿಸಿಕೊಂಡರೆ ಯಾವ್ ಲೆಕ್ಕದಲ್ಲಿ ಮಾನವನ ತೋಳ್ಬಲ ಜಾಸ್ತಿರಿ? ಈ ಬುದ್ದಿಶಕ್ತಿ ಒಂದ್ ಹೆಚ್ಚು ಇಲ್ದಿದ್ರೆ ಯಾವತ್ತೋ ವಿನಾಶ ಅಗೊಗ್ತಿದ್ದ ಮಾನವ. ಇಷ್ಟೆಲ್ಲಾ ಆವಿಷ್ಕಾರಗಳ ನಂತರವೂ ನಿಸರ್ಗದ ಅಗಾಧ ಶಕ್ತಿಯ ಮುಂದೆ ನಾವು ತೃಣಕ್ಕೆ ಸಮಾನ ಎಂದು ಎಷ್ಟೋ ಸಲ ಸಾಬೀತಾಗಿದೆ.

ನಾನೇನು ಕೇಳಲು ಬಯಸುತ್ತಿರುವೆ ಎಂದರೆ ಈ ಮಾನವ ಜನ್ಮದ ಪರಮ ಧ್ಯೇಯವೇನು? ಮುಂದಿನ ಪೀಳಿಗೆಗೆ ಈ ಪ್ರಪಂಚವನ್ನು ಸುಖಕರವಾಗಿರಲು ಬಿಡುವುದಾ? ಅಥವಾ ಪೈಪೋಟಿ ನಡೆಸಲು ಬಿಡುವುದಾ? ಈಗ ಜನನದಿಂದಲೇ ಶುರುವಾಗುವ ಈ ಪೈಪೋಟಿ ಕೊನೆಯುಸಿರೆಳೆಯುವವರೆಗೂ ಸಾಗುತ್ತಿದೆ. ಅಗತ್ಯವೇ ಆವಿಷ್ಕಾರದ ತಾಯಿ ಎಂದು ಹೇಳ್ತಾರೆ, ಆದರೆ ಈ ಅಗತ್ಯದ ತಾಯಿಯನ್ನು ಹುಡುಕಬೇಕಿದೆ. ಬದುಕಲು ಬೇಕಾದ ಗಾಳಿ-ನೀರು-ಆಹಾರ ಜೊತೆಗಿದ್ದಾಗ, ಮೂರನ್ನು ಕಲುಷಿತ ಗೊಳಿಸಿದೆ ನಮ್ಮೀ ಯೋಚನಾ ಶಕ್ತಿಗೆ ಜೈ ಅನ್ನಬೇಕೋ ಮತ್ತೊಂದನ್ನಬೇಕೋ ನಾನರಿಯೆ.

  "ಲೇ, ಇಷ್ಟೆಲ್ಲಾ ಬರೆಯೋನು ಹೋಗಿ ಕಾಡಲ್ಲಿ ಬದುಕೋ" ಎಂದು ಕೇಳುವ ಮುನ್ನ ದಯವಿಟ್ಟು ತಡ್ಕೊಳ್ಳಿ :)  ಸುಮ್ನೆ ಕೆಲ್ಸ ಇಲ್ದೆ ಏನೋ ಗೀಚಿದೀನಿ, ಈ ಜಗತ್ತು ಬದಲಾದ ಪರಿಯ ಬಗ್ಗೆ ನೆನೆದು ತಲೆಗೆ ತೋಚಿದ್ದನ್ನು ಬರವಣಿಗೆ ರೂಪ ಕೊಡುವ ಸಣ್ಣ ಪ್ರಯತ್ನ ಅಷ್ಟೇ,  ನಾನು ನಿಮ್ಮೊಳಗೊಬ್ಬ, ಇದನ್ನ ಯೋಚ್ನೆ ಮಾಡ್ತಾ ಅಂತೂ ಕೂತ್ಕೊಳಲ್ಲ, ಬೆಳೆಗಾದರೆ ತಯಾರಾಗಿ ID ಕಾರ್ಡ್ ಎತ್ಕೊಂಡು ಕೆಲಸಕ್ಕೆ ಓಡಬೇಕು. ಆಗಿರೋ ಆವಿಷ್ಕಾರಗಳೆಲ್ಲವನ್ನು ಅನುಭವಿಸುತ್ತ, ಏನೋ ಕಲಿತ ಕೆಲಸ ಮಾಡುತ್ತಾ, ಬದುಕೆಂಬ ಬಂಡಿ ಆರಾಮಾಗೆ ಸಾಗಿಸ್ತಾ ಇದಿನಿ. ಈಗಾಗಲೇ ಡಾರ್ವಿನ್ ಅಂಥ ಮಹಾನ್ ವ್ಯಕ್ತಿಗಳು ಇದರ ಬಗ್ಗೆ ಸಿದ್ಧಾಂತ ಬರ್ದಿದಾರೆ, ನಾವ್ಯಾಕೆ ತಲೆ ಕೆಡ್ಸ್ಕೊಳೋಣ, ಯಾವಾಗಲೋ ನಮ್ಮ ಜೀವಶಾಸ್ತ್ರ ವಿಷಯದ ಮೇಷ್ಟ್ರು ಮಾಡಿದ ಪಾಠ ಅಷ್ಟು-ಇಷ್ಟು ನೆನಪಿದೆ, ಸಮಯ ಮಾಡ್ಕೊಂಡು ಇನ್ನೊಂದ್ಸಲ ಓದಿ ಅದೇನ್ ಅರ್ಥ ಆಗತ್ತೋ ನೋಡ್ತಿನಿ., ನೀವ್ ತಲೆ ಕೆಡ್ಸ್ಕೊಬೇಡಿ. ಮತ್ತೆ ಸಿಗೋಣ. ಬಹುಷಃ ಇನ್ನೊಂದು ತಲೆ-ಬುಡ ವಿಲ್ಲದ ಬರಹದ ಜೊತೆ.

-ಭದ್ರ

Sunday 25 June 2017

ಕನ್ನಡ ಪ್ರೀತಿ ಮತ್ತು ಹಿಂದಿ ಹೇರಿಕೆ

ಕನ್ನಡ ಪ್ರೀತಿ ಮತ್ತು ಹಿಂದಿ ಹೇರಿಕೆ

        ನಮಸ್ಕಾರ ಸ್ನೇಹಿತರೆ, ಕಳೆದ ವಾರದಿಂದ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಈ ಹಿಂದಿ ಹೇರಿಕೆಯ ವಿಷಯ ಮೊದಲಿಗೆ ನನ್ನ ಕಿವಿಗೆ ಬಿದ್ದಾಗ, ನನ್ನನ್ನು ಕಾಡಿದ ಮೊದಲ ಗೊಂದಲಾತೀತಮಯ ಪ್ರಶ್ನೆ, ಏನಾಗ್ತಿದೆ ಈಗ? ಯಾಕೀ ಬದಲಾವಣೆಯ ಬಿರುಗಾಳಿ ಏಕಾಏಕಿ ಸದ್ದು ಮಾಡ್ತಿದೆ?  ಅದು ಬಿಟ್ಹಾಕಿ ಹೋಗ್ಲಿ, ಹುಟ್ಟಿದಾಗಿನಿಂದಲೂ ಕನ್ನಡ ಭಾಷೆ ಮಾತನಾಡುತ್ತ  ಬೆಳೆದಿರುವ ನನಗೆ ಈ ವಿಷಯದ ಪರವಾಗಿ ನಿಲ್ಲಬೇಕೋ? ವಿರೋಧಿಸಬೇಕೋ? ಅಥವಾ ಎರಡನ್ನು ಬಿಟ್ಟು ಅಲಿಪ್ತನಾಗಿರಬೇಕೋ? ಯಾವುದೂ ಅರಿಯದ ಪರಿಸ್ಥಿತಿ ತಲುಪಿದೆ. ಮೊದಳೆರಡರಲ್ಲಿ ಯಾವುದನ್ನು ಆಯ್ದುಕೊಂಡರೂ, ಇನ್ನೊಂದು ಕಡೆಯವರ ಕೆಂಗಣ್ಣಿಗೆ ಗುರಿಯಾಗುವುದಂತೂ ಖಚಿತ. ತಲೆ-ಬುಡ ಇಲ್ಲದ ಚರ್ಚೆಗಳು, ತೀಕ್ಷ್ಣ ಕಮೆಂಟ್ಸ್ಗಳ ಸುರಿಮಳೆ, ಹನುಮನ ಬಾಲದಂತೆ ಕೊನೆ ಇರದೇ ಬಿಗಿಯುವ ಭಾಷಣಗಳು, ಇತ್ಯಾದಿ,ಇತ್ಯಾದಿ (ಇದಕ್ಕೆ ನಾನೂ ಹೊರತಲ್ಲ.). ಮೂರನೆ ಆಯ್ಕೆ ಅತಿ ಸುಲಭ, ಯಾರ ಭಯವು ಇಲ್ಲ, ಯಾವ ಜಂಜಾಟವೂ ಇಲ್ಲ,  ಬಡಿದಾಡೋರು ಬಡಿದಾಡಿಕೊಂಡು ಸಾಯ್ಲಿ, ನಮ್ಮಪ್ಪನ ಮನೆ ಗಂಟ್ ಏನ್ ಹೋಗೋದಿದೆ? ನಾನ್ ಆರಾಮಾಗ್ ಇರ್ತಿನಲ್ಲಪ್ಪ, ಅಯ್ಯೋ ಅಸ್ಟು ಸಾಕ್, ನನ ಮಗಂದ್..

        ಈ ತರಹದ ವ್ಯಕ್ತಿತ್ವ, ನೋಟಕ್ಕೆ ತಪ್ಪಲ್ಲದಿದ್ದರೂ, ತಪ್ಪು ಎಂಬ ಭಾವನೆ ನನ್ನ ಮನದಳದಲ್ಲೇಕೊ ಇತ್ತೀಚಿಗೆ ಬಹಳ ಆಳವಾಗಿ ಊರಲು ಶುರು ಮಾಡಿತು. ನಾ ಕಂಡ ಬಹಳಷ್ಟು ಜನ ಈ ಗುಂಪಿಗೆ ಸೇರಿದವರು. ಇದು ಪ್ರಾಯಶಃ ಸತ್ವ ಇರದ ಯಾಂತ್ರಿಕ ಜೀವನವನ್ನು ಸ್ವಚ್ಛಂದವಾಗಿ ನಡೆಸಲು ಅನುವು ಮಾಡಿಕೊಡಬಹುದೇನೋ, ಈ ಆಯ್ಕೆ ಅವರವರ ಸ್ವಾತಂತ್ರಕ್ಕೆ ಬಿಟ್ಟ ವಿಚಾರ, ಆದರೆ ನನ್ನ ದೃಷ್ಠಿಕೋನದಲ್ಲೇಕೋ ಇದು ಸರಿ ಅನಿಸಲಿಲ್ಲ. ಈ ಗುಣ ಯಾರ ಮನೆಯನ್ನೂ ನಾಶ ಮಾಡುವುದಿಲ್ಲವಾದರೂ, ಒಬ್ಬನ ಅಸ್ತಿತ್ವವನ್ನು ಪ್ರಶ್ನೆ ಮಾಡುವುದಂತೂ ನಿಜ ಅನಿಸತೊಡಗಿತು. ಬದುಕು ಇರುವುದು ಯಾಂತ್ರಿಕ ಜೀವನಕ್ಕಾಗಿ ಅಲ್ಲ ಎಂಬ ಸತ್ಯ ಅರಿತ ನನಗೆ ಯಾವುದಾದರು ಒಂದು ಪಡೆಯನ್ನು ಸೇರುವ ನಿರ್ಧಾರ ಸರಿ ಎನಿಸಿತು.

        ಸರಿ ಈಗ ವಿಷಯಕ್ಕೆ ಬರೋಣ. ಇದರ ಬಗ್ಗೆ ನನ್ನ ಅಭಿಪ್ರಾಯಕ್ಕೆ ಬರುವ ಮುನ್ನ, ಹೇರಿಕೆ ಪದದ ವ್ಯಾಖ್ಯಾನ ತಿಳಿದುಕೊಳ್ಳಬೇಕಾಯಿತು, ಸದ್ಯಕ್ಕೆ ನಡೆಯುತ್ತಿರುವ ಹೇರಿಕೆ ವಿರುದ್ದದ ಪ್ರತಿಭಟನಾ ವಿಧಾನಗಳ ಬಗ್ಗೆ ನಗಬೇಕೆಂದೆನಿಸಿತು. ಉದಾ: "ನಮ್ಮ ಮೆಟ್ರೋ" ದಲ್ಲಿ ಹಿಂದಿ ಬೇಡ.. ಆದರೆ ಯಾಕೆ ಹಿಂದಿ ಬೇಡ? ಎನ್ನುವ ನನ್ನ ಕುತೂಹಲಕ್ಕೆ ಸಮಂಜಸ ಉತ್ತರವಂತೂ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಯಾರೂ ಬಂದು ನೀನು ಈ ನಿಲ್ದಾಣದ ಹೆಸರನ್ನು ಹಿಂದಿಯಲ್ಲೇ ಓದಬೇಕು ಎಂದು ಹೇಳಲಿಲ್ಲ, ಹಾಗು ನಿಮಗೆ ಇಷ್ಟವಾದ, ನೀವು ಪ್ರೀತಿಸುವ ಮಾತೃಭಾಷೆಯಲ್ಲಿ ಓದುವ ಅವಕಾಶವನ್ಯಾರು ಕಸಿದುಕೊಂಡಿಲ್ಲ. ಹಂಗಾದ ಮೇಲೆ ಹೇರಿಕೆ ಪದದ ಬಳಕೆ ಯಾಕೆ ಬಂತು ಅಂತ ನಾ ಕಾಣೆ. ಪ್ರತಿದಿನ ಕಾಣುವ ನಾಮ ಫಲಕಗಳ ಮೇಲೆ ಕಾಣಸಿಗುವ ಹಿಂದಿಯನ್ನೇ ಹೇರಿಕೆ ಅಂತ ಬಿಂಬಿಸಿದರೆ ಅದ್ಯಾಕೋ ಅತಿಶಯೋಕ್ತಿ ಅಂದೆನಿಸುತಿದೆ.


        ನಿಜವಾದ ಹೇರಿಕೆ ಅಂತೇನಾದರೂ ನಾ ಕಂಡರೆ, ಕನ್ನಡವನ್ನು ಧಿಕ್ಕರಿಸಿ ಹಿಂದಿಯನ್ನು ಮೇಲೆತ್ತುವ ಪ್ರಯತ್ನ ಮಾಡಿದಲ್ಲಿ ಅದನ್ನು ಹೇರಿಕೆ ಎನ್ನಬಹುದು, ಅಥವಾ ಹಿಂದಿಯನ್ನು ಕಲಿಯಲೇಬೇಕು ಎಂಬ ಕಡ್ಡಾಯವನ್ನು ಹೇರಿದಲ್ಲಿ ಹೇರಿಕೆ ಎನ್ನಬಹುದು. ನನಗೆ ತಿಳಿದಹಾಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ೫ ನೇ ತರಗತಿಯಿಂದ ಹಿಂದಿ ಒಂದು ಭಾಷಾ ವಿಷಯ, ಕಡ್ಡಾಯವಾಗಿ ಉತ್ತೀರ್ಣರಾಗಬೇಕು, ಸೋಜಿಗವೆಂದರೆ ನಾನು ೫ ನೇ ತರಗತಿಗೆ ಕಾಲಿಟ್ಟಾಗ, ಯಾರೂ ಈ ವಿಷಯ ಪ್ರಸ್ತಾಪಿಸಲಿಲ್ಲವೆ? ಇದು ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಏನೂ ಕಾಣುತ್ತಿಲ್ಲ, ಕನ್ನಡಿಗರಾದ ನಮಗೆ ಇದು ಇಷ್ಟು ದಿನ ಹೊಳೆಯಲಿಲ್ಲವೇ? ಅಥವಾ ಇದರ ಬಗ್ಗೆ ಹೋರಾಟಗಳು ಏನಾದರು ನಡೆದಿದ್ದರೆ ದಯಮಾಡಿ ತಿಳಿಸಿಕೊಡಿ. ಅದಕ್ಕೇನಂತೆ? ಮಾನವರಲ್ಲವೇ ನಾವು? ತಪ್ಪನ್ನು ತಿದ್ದಿಕೊಳ್ಳೋಣ. ಪ್ರತಿಭಟಿಸುವುದಾದರೆ ಮೊದಲು ಇದನ್ನು ನಿಲ್ಲಿಸಿ, ನನಗಂತೂ ೫ ನೇ ಕ್ಲಾಸಲ್ ಹಿಂದಿ ಓದುವಾಗ ಕಣ್ಣಲ್ಲಿ ನೀರು ಬಂದಿದ್ದಂತೂ ಸತ್ಯ. ಅದನ್ನು ಬಿಟ್ಟು ಮೆಟ್ರೋದಲ್ಲಿ ಹಿಂದಿ ಬೇಡ, ಅಂಚೆ ಕಛೇರಿ ಲಾಂಛನ ದಲ್ಲಿ ಕನ್ನಡ ಇಲ್ಲ.ರಾಷ್ಟ್ರೀಯ ಹೆದ್ದಾರಿ ಮೈಲಿಗಲ್ಲಿನ ಮೇಲೆ ಹಿಂದಿ ಇದೆ ಅಂದ್ರೆ ಹೆಂಗ್ ಸ್ವಾಮಿ ತಡ್ಕೊಬೇಕು ಜೀವ?  ಅಂಚೆ ಕಛೇರಿಯದ್ದು "ಲಾಂಛನ" ಸ್ವಾಮಿ ಅದು, ಕೇಂದ್ರ ಸರ್ಕಾರದ ಒಂದು ಅಂಗ. ಏಕೀಕೃತ ಭವ್ಯ ಭಾರತಕ್ಕೆ ಅದೊಂದೇ ಲಾಂಛನ. ಇನ್ನು ಈ ಕೊರಟಗೆರೆ ಮೈಲಿಗಲ್ಲಿನ ಉದಾಹರಣೆಗೆ ಬರೋದಾದ್ರೆ, ಅದು ನಮ್ಮ ರಾಜ್ಯ ಹೆದ್ದಾರಿ ಆ ತಪ್ಪನ್ನು ಘನತೆವೆತ್ತ ಕರ್ನಾಟಕ ಸರ್ಕಾರ ತಿದ್ದಿಕೊಳ್ಳಲೇ ಬೇಕು. ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ-ನಿಮ್ಮ ಪ್ರೀತಿಯ ಕನ್ನಡ ಮುಖ್ಯ, ಪಕ್ಕದಲ್ಲಿ ಯಾವ ಭಾಷೆ ಬೇಕಾದರೂ ಬರೆದುಕೊಳ್ಳಿ. ಮೆಟ್ರೋದಲ್ಲಿ ಕನ್ನಡವಿದ್ದರೆ ಸಾಕು.



        ಚೆನ್ನೈ ಮೆಟ್ರೋದಲ್ಲಿ ಹಿಂದಿ ಇಲ್ಲ ಅಂತ ನಮ್ಮ ಮೆಟ್ರೋದಲ್ಲೂ ಹಿಂದಿ ಬೇಡ ಎನ್ನುವ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ನಿಮಗಿದು ತಿಳಿದಿದೆಯೋ ಇಲ್ಲವೋ, ಅಖಂಡ ಭಾರತ ದೇಶದ ತುಂಬಾ ಪ್ರತಿ ಜಿಲ್ಲೆಗೊಂದು "ಜವಾಹರ್ ನವೋದಯ ವಿದ್ಯಾಲಯ"ವಿದೆ. ಅದೊಂದು ರಾಜೀವ್ ಗಾಂಧಿಯವರ ಅಮೋಘ ಕನಸು, ಪ್ರಸ್ತುತ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃಧ್ದಿ ಇಲಾಖೆ ಅಡಿಯಲ್ಲಿ ಬರುತ್ತದೆ. ಈ ವಿದ್ಯಾಲಯ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳ ಬಾಳಿನ ಬೆಳಕು ಎಂದರೆ ತಪ್ಪಾಗಲಾರದು. ಬಹುಶಃ ಇದಿಲ್ಲದಿದ್ದರೆ ನಾನಿವತ್ತು ಯಾವ ಸ್ಥಿತಿಯಲ್ಲಿ ಇರ್ತಿದ್ನೋ ಆ ದೇವ್ರೇ ಬಲ್ಲ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ,  ನವೋದಯ ಶಾಲಾ ವಿದ್ಯಾರ್ಥಿಯೇ ಬಲ್ಲ ಈ ವಿದ್ಯಾಲಯದ ಬೆಲೆ. ಈ ವಿಷಯ ಇಲ್ಲೇಕೆ ಪ್ರಸ್ತಾಪಿಸಿದೆ ಎಂದರೆ, ತಮಿಳರ ದುರದೃಷ್ಟವೋ ಏನೋ ತಮಿಳುನಾಡಿನಲ್ಲಿ ಒಂದೂ ನವೋದಯ ವಿದ್ಯಾಲಯವಿಲ್ಲ. ಕಾರಣ ಇಷ್ಟೆ,  ಚೆನ್ನೈ ಮೆಟ್ರೋದಲ್ಲಿ ಹಿಂದಿ ಹೇಗೆ ಬೇಡವೋ ಹಾಗೆ ಈ ಶಾಲಾ ಅಭ್ಯಾಸದಲ್ಲೂ ಹಿಂದಿ ಬೇಡವಾಗಿತ್ತು. ಆದ್ರೆ ಹೇಳೋರ್ಯಾರು ಸ್ವಾಮಿ ಈ ತಮಿಳರಿಗೆ? ಈ ವಿದ್ಯಾಲಯದಲ್ಲೂ ಹಿಂದಿ ಒಂದು ಐಚ್ಚಿಕ ವಿಷಯ. ನವೋದಯ ವಿದ್ಯಾಲಯ ಸಮಿತಿ ತ್ರಿಭಾಷ ಪದ್ದತಿಯನ್ನು ಕಡ್ಡಾಯವಾಗಿ ಪಾಲಿಸುತ್ತಿದೆ ಅನ್ನೋ ಮೌಡ್ಯತೆಯನ್ನು ಅವರಲ್ಲಿ ಯಾರೂ ತುಂಬಿದ್ದಾರೋ ನಾನರಿಯೆ. ಈ ಪರಿಸ್ಥಿತಿ ನಮ್ಮ ಕನ್ನಡ ನಾಡಿನಲ್ಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. http://www.thehindu.com/todays-paper/tp-national/tp-tamilnadu/samithi-pitch-for-navodaya-schools/article2566316.ece

        ಇನ್ನು ಬ್ಯಾಂಕುಗಳಲ್ಲಿ ಕೊಡಲಾಗುವ ಕನ್ನಡ ಪ್ರಾಮುಖ್ಯತೆಯನ್ನು ನಾನೂ ಖಂಡಿಸುತ್ತೇನೆ, ಇರೋಬರೋ ಫಾರಂಗಳನ್ನು ತುಂಬಲು ಕಷ್ಟ ಆಗುತ್ತಿರುವುದಂತು ನಿಜ, ಈ ವಿಷಯದಲ್ಲಿ ಮಾತನಾಡುವುದಿದ್ದರೆ ನನ್ನ ಬೆಂಬಲವಿದೆ. ಅದೂ ಕನ್ನಡ ಸೇರಿಸಲು, ಹಿಂದಿ ತೆಗೆಸಲು ಅಂತೂ ಅಲ್ಲ. ಬೇಕೆಂದರೆ ಭಾಷೆಗೊಂದರಂತೆ ಫಾರಂಗಳನ್ನೂ ಕೊಡಲಿ, ನಾನೇಕೆ ಬೇಡ ಎನ್ನಲಿ?
ಬನ್ನಿ ಸ್ವಾಮೀ, ಸಾದ್ಯ ಆದ್ರೆ ಕನ್ನಡವನ್ನು ಪ್ರೀತ್ಸೋಣ, ನಾಮ ಫಲಕದ ಮೇಲೆ ಸುಮ್ಮನೆ ಕುಳಿತಿರುವ ಹಿಂದಿಯ ಮೇಲೇಕೆ ನಿಮ್ಮ ಕೋಪ?

-ಭದ್ರ

Sunday 2 April 2017

Opinions and Perspectives

After my initial thoughts of writing something and having written something about ‘writing’, then came other day where my fingers were on ASDF JKL; eager to flow-in the thoughts running in my mind into the brain of laptop, but this damn thought process in me was still in pursuit of ideas going at tortoise phase leaving the fingers jobless, which were just bracing over keys without hitting anything, then I started leaning back on the chair till the head rested back, next reflex which followed was my eyes were closing, hands were moving away from keyboard and eight of the ten fingers were gently caressing the sides of forehead, with outer edge of thumbs resting on cheeks just in from of ears, probably they were hoping that would accelerate the condition, Looks like they were right, something just stroke and disappeared that left eyes wide open, some sensible meme which made me read it multiple times gradually faded in and out till it stood still, although the source of it was vaguely visible, the content was crystal clear, It was about Opinions and Perspectives, let me share my views( sorry!! Opinion J ) about it today... Finally fingers got some job J
All these years having come across many shades which are part of our life including likes, dislikes, laughter, tears, love, arguments, surprises, disappointments, compromises, madness, etc, and few unanswered queries covering - Why me? Why not this way? Why did I fight with him? What made her move away from me? And few times we wish the time to start flying backwards and get an opportunity to rectify few things – a wish that might never be granted, and the list continues which will be way different for each of us, only thing that is constant with all of us is the variable – opinion which varies daily and is usually governed by the perspective we get to see everyday.

Well, here is the meme which gave me a topic to crib today:
Which side of the mug has the handle?

Batman: It’s on the left bro!!
Superman: It’s on the right buddy.
Batman: No!! I can see it clearly Superman, It’s on the left
Superman: What are you talking dude, do you think am lying?
...
 ... 


This was one fascinating piece of explanation I came across in recent times, which accurately depicted how strangely our opinions can differ based on our perspectives, So Who’s right and who’s wrong in above conversation? Batman or Superman? Just by looking at the picture, we tend to take the batman’s side and think this superman is no more super, But the fact is, If they are sitting on opposite sides of a table facing each other, none of them may be wrong, Superman would continuously argue with Batman unless he comes over the other side and takes a look at the mug and says “Oh yeah!! Sorry bro, I didn’t look at the mug from your angle”, the same with us too?

Just as an example, for some, Sachin Tendulkar is the greatest cricketer of all time because of his master class strokes, for some Virat Kohli because of his consistency at young age, for some its Dhoni because of different reason, and for some it’s not a valid comparison to begin with, for some cricket isn’t a sports at all, and for some “who is Sachin Tendulkar?” and some makes an issue for not knowing Sachin, and some argue what is wrong in not knowing him. So this circle of opinions about little master can grow endlessly, Is anyone wrong here? again its upto individuals, I believe each one of them formed their own opinion about the topic by the perspective they got to see or hear, The point I am trying to make here is, we would have walked hundreds, possibly thousands of miles in life, with friends and family, seen each thing, each incident from the vision it allowed us to see it, understood it the way we learn it, saved memories as we saw them, formed opinion about someone or something based on what others told, as we may think other peson had right perspective, there is nothing wrong about it, we are slaves of our own master and we just listen to our master, we generate opinions based on our perspective,
Did we not encounter the similar situation in our life as the mug drama between Batman and Superman? How often we fight with our dear ones with a strong belief that we are right? happens quiet easily?, Every time we miss the simplest step to put ourselves into other person’s shoes and have a look at it even though other person may be wrong or right, we never know what hardships others have faced, what battles others are fighting, and what perspectives they got to form their opinion. Though our master doesn’t allow us to do so, we will have to try to come out, if at all we don’t want to have the unanswered queries. Oh Yeah, Me? I am still a beginner, who just started to understand the world; I will put my best efforts to broaden my perspective J

        There is a good kannada movie named Ulidavaru Kandante directed by Rakshit Shetty, which revolves around an incident in which each character narrates the story in their own perspectives. good to watch.

-Bhadra

P.S: All the words written above are purely from my opinion which were generated from my own perspective, if something isn’t right in your opinion, please allow me step into your shoes and see it J

Sunday 26 March 2017

Something to start with


Well, I had this plan to write something for long time, one beautiful Sunday afternoon I was almost certain - something should be done for this long desire which was haunting me over last few years, But most important question I had was: What to Write? While I started to scratch my head to find a topic, another thought just flashed, First of all Why should I write?  Instead of getting an answer for ‘what’, it started getting tougher for me to find the answer for ‘Why’ part, I really had no clue why I wanted to write something, but the feeling to do so wasn’t getting away from me,

As software professionals if we have no clue about something, first thing that strikes our mind is Google!!! Oh dear Google, You probably don’t know how many lives you have saved till today, Yeah like small kid who obeys mom’s order I just followed what mind was thinking, opened my laptop, clicked on the concentric circle with blue circle in middle surrounded by another with one third of read, greed and yellow each on my screen, bear with me there - that was a stupid explanation for Google chrome web browser logo, and straight away typed in ‘why do people write...’ answers started popping out without even letting me to complete as if there is no tomorrow.

Here are few of them
·         It’s a career? – Sure shot NO.
·         It’s a hobby? – may be
·         It’s a way to sort out the feelings? I have few close friends with whom my life was a open book.
·         Nothing in world makes me happier? – let me think about it, ahem – NO
·         Make a name? – Ha ha, I am too many light years away from it.
·         Write to change the world? – oops, too scary words, it does makes sense though but I was not in that path at least
·         Beliefs I need to share? Oh sounds interesting, first I thought its same as point #3, but felt they are different.
·         Write to connect with people with whom I never had contact otherwise? – yeah this one I tend to do a lot, add to bucket
·         It enables to find myself? Seriously? This one too? I though only travelling or facing a tough time would help, anyway +1 probably writing is very tough thing as well.
·         My girlfriend likes me write? Oh No, Someone help me please, But hold on, just got another topic to write, that would be one of my next topics.
·         It stops me from getting bored? May be, +1
·         Have lot of free time? Free time – as per my definition we can make ourselves free for anything if we really want to, it applies to as simple thing as calling friends and family instead of saying I am busy. So free time is something we should make instead of having it.
·         I enjoy writing? I was not quite sure about this, do I enjoy writing? Well let me see how it turns out.

While the list was getting endless, I halted there, did I find my answer? The nearest I could align myself within the list was - Beliefs i need to share, If possible find another myself, and start enjoy writing. These are all sounded true, but, on top of all of these I ended up with altogether a different answer, why should I write? In few words: “I should write because I have this long lasting desire to write” Initially I was little skeptical about it and I was resistant to accept it, but I felt it was actually true, yeah fulfilling something that our soul desires, should be a good enough reason to do it, not just writing - be it anything, Something is haunting us? Wake up and stand for it. that's what keeps us alive in true sense, chase the dreams and attain a feeling of accomplishment,

      OK, Now what to write? Never imagined i would write something about ‘writing’. It just begins here, with the tiny vocabulary I have. Oh wait, not here really, few years ago I had written a post in my blog:
http://bhadra7.blogspot.com/2013/11/does-it-job-takes-our-freedom-off.html it was almost three and half years ago. I was just curious to put on my views after reading something on a website at that time. 

      While writing seem to be a skilled art, I am just a naive who wants to do something just because I have a desire to do, though I have cribbed whatever sense or nonsense I was thinking today, truly speaking I don’t even know what would be the title for this post, just named it as Something to start with, I am hoping to write something with an agenda, needed a beginning and possibly this might be a chance. As I always wish to travel, go to new places, meet new people and make friends with them I have lot travel stories, probably I will start there, or write some logical opinion which may sound totally illogical to others, a review on something, or just like today as found this writing itself can be a topic to begin with, I may find something interesting. But a spark has been ignited; I have to check if I can fuel it time to time to keep it on.

        Somewhere I have read this: “Before we write something we have to read a lot” that absolutely seems true to me, it improves our vocabulary and way we see things, damn!!!! What am I doing then? Just finished a famous Kannada book “Chidambara Rahasya” written by K.P. Poornachandra Tejaswi, time to pick new one. 

-Bhadra

Sunday 3 November 2013

Does 'IT' job takes our Freedom off?

Does IT industry takes our Freedom off? Really?

Well to begin with, it started this way:
While Browsing through my mails, happened to notice an interesting question answered on some Question-Answer website/blog called Quora...
This was the Question:

How good is a salary of INR 16 lakh p.a. for a 21 year old?

And the best voted answer was:

“It takes the freedom out of an employee. I am pretty sure, that an employer who pays you 16 lpa is smart enough to take away all your freedom” and the answer continues..

And this was the explanation for the statement:
“ Point is, 21-30 is the time to explore, to travel round the world and do things you are really curious about, fall in love, start a revolution, and learn how to play the guitar maybe?” 
Eventually, the guy left the job and he is working in science Institute, with 16kpm.

So how far is this true then?
After reading this answer, got a doubt in me what exactly Freedom means? Should it be redefined now just to understand the answer, or should we recollect what was taught in middle school?
This was what we learnt:
  1. The power or right to act, speak, or think as one wants.
  2. The state of not being imprisoned or enslaved.

Don’t we have the right to act, speak or think as we want? I am sure we do have it.
of course we cannot express/act/speak irrelevant things at certain times; we act according to the situation.
Eg: you cannot arrange a rock show at someone’s funeral.

Are we imprisoned or enslaved? Definitely not physically.
Mentally? Maybe it depends on how we approach it. If we feel yes, certainly there must be a boundary for imprisonment right? What is it constructed with?

Most of us would say “work load”. Ok let’s keep this for discussion.

So can’t the above things (the travel, the love, the revolution, the guitar blah blah blah) be done with an IT job with 16lpa salary with work load?

If a job that offers 16lpa doesn’t allow us to do those stuffs, the job with 16kpm also shouldn’t allow, in fact I would argue that no job in the world would allow all those stuff if an IT job doesn’t allow.

Because a job is a job and personnel life is personnel life, Even though both run parallel they are still apart, like parallel railway tracks, one without the other of no use and remember the fact that both can never converge together as well.

In my 1 year of IT experiance, I have seen guys who burn themselves at their desks, yet they were able to achieve above stuffs.

The travel – people been to great places in just one year.
The love – yeah, seen couples who made love, got married, and settled happily now 
J
The revolution – yes, seen couple of guys who work immensely for public well being, and always ready to help in any cases, ready to gather statistics using RTI and the list continues, and their professional growth is Excellent.
The guitar – yes, I do have example for this. May be we can consider this as an hobby.

“Work load” was always there since I see them everyday.
Were they not able to break that “work load” boundary?
So how did they manage these stuffs with a high paid IT job in hand?

Yes, all that matters is “planning”
how well we organize the things,
how well we can manage both stuffs as separate entities taking them together.
I am not an expert at it though 
J am a mere beginner at this.
If we have passion for something I believe we can make some 'time' for that to achieve.

I may not be 100% right. But pretty confident that work and life are separate things and balancing them is up to us. Let’s not mix them up and make things complex to handle.

A guy earns 16 lpa at the age of 21? Congrats man you are worthy of something. that's great at this age :)

Now tell me does IT job takes our Freedom off? Not really :)

-Bhadra